ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಮರೆಯಲಾರದ ಕಾರ್ಯಕ್ರಮ - ಕಲಾಪ್ರಕಾಶ ಪ್ರತಿಷ್ಟಾನದ ರಜತೋತ್ಸವ ಸಂಭ್ರಮ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಬುಧವಾರ, ಒಕ್ಟೋಬರ್ 16 , 2013
ಬೃಹನ್ಮುಂಬಯಿಯ ಮಹಾಜನತೆಗೆ ಕಳೆದ 25 ವರ್ಷದಿಂದ ಯಕ್ಷಗಾನದ ವಿವಿದ ಪ್ರಾಕಾರಗಳ ಸವಿಯನ್ನು ಉಣಿಸಿಕೊಂಡು ಬರುತ್ತಿರುವ, ಗೌರವಾನ್ವಿತ ಕಲಾಸಂಘಟಕ ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್ ಸಾರಥ್ಯದ ಸಾಂಸ್ಕ್ರತಿಕ ಸಂಘಟನೆ ಕಲಾಪ್ರಕಾಶ ಪ್ರತಿಷ್ಟಾನದ ಬೆಳ್ಳಿ ಹಬ್ಬ ಕಾರ್ಯಕ್ರಮ ಮುಂಬೈ ಕುರ್ಲಾ ಪೂರ್ವ ಬಂಟರ ಭವನದಲ್ಲಿ ವೈವಿದ್ಯಮಯ ಯಕ್ಷಗಾನ ಸಂಬಂದಿ ಕಾರ್ಯಕ್ರಮದೊಂದಿಗೆ ದಿನಪೂರ್ತಿ ನೆಡೆಯಿತು.

ಅಕ್ಟೋಬರ್ 6ರ ಪೂರ್ವಾಹ್ನ ಸುಪ್ರಬಾತ ಸಂಭ್ರಮದಲ್ಲಿ ಯಕ್ಷಗಾನ ದಿಗ್ಗಜರನೇಕರ ಒಕ್ಕೂಟದೊಂದಿಗೆ ಪೆರ್ಡೂರು ಮೇಳದ ಕಲಾವಿದರಿಂದ ಚಂದ್ರಹಾಸ ಚರಿತ್ರೆ ಯಕ್ಷಗಾನ ನೆಡೆಯಿತು. ಮದ್ಯಾಹ್ನ ನೆರೆದ ಸಾವಿರಾರು ಪ್ರೇಕ್ಷಕರಿಗೆ ಸಿಹಿ ಊಟ ನೀಡಲಾಯಿತು. ಮದ್ಯಾಹ್ನ ಸನ್ಮಾನ ಸಂಭ್ರಮದಲ್ಲಿ ಶ್ರೀ ಸುರೇಂದ್ರ ಕುಮಾರ್ ಹೆಗ್ಡೆ ಅದ್ಯಕ್ಷರು ಕನ್ನಡಿಗ ಕಲಾವಿದರ ಒಕ್ಕೂಟ. ಇವರ ಅದ್ಯಕ್ಷತೆಯಲ್ಲಿ ಬಡಗುತಿಟ್ಟಿನ 13 ಮಂದಿ ಕಲಾವಿದರಾದ ಜಲವಳ್ಳಿ ವೆಂಕಟೇಶ ರಾವ್, ವಂಡ್ಸೆ ನಾಗಪ್ಪ ಶೆಟ್ಟಿ. ಆರ್ಗೋಡು ಮೋಹನದಾಸ ಶೆಣೈ. ಮೊಳಹಳ್ಳಿ ಹೆರಿಯ ನಾಯಕ್. ಎಂ. ಏ. ನಾಯಕ್, ಮಜ್ಜಿಗೆಬೈಲು ಆನಂದ ಶೆಟ್ಟಿ. ಗಾವಳಿ ಶೀನ ಕುಲಾಲ್. ದಯಾನಂದ ನಾಗೂರು, ಹರಾಡಿ ಸರ್ವ ಗಾಣಿಗ, ಹೆಮ್ಮಾಡಿ ರಾಮ ಪೂಜಾರಿ, ಎಳ್ಳಂಪಳ್ಳಿ ಜಗನ್ನಾಥ ಆಚಾರ್, ತೀರ್ಥಳ್ಳಿ ಗೋಪಾಲಾಚಾರ್, ಆನಂದ ದೇವಾಡಿಗ, , ರಾಘವೇಂದ್ರ ಆಚಾರ್ ಇವರನ್ನು ತಲಾ ಹತ್ತು ಸಾವಿರ ನಗದಿನೊಂದಿಗೆ ಸನ್ಮಾನಿಸಲಾಯಿತು. ಇವರೊಂದಿಗೆ ಮುಂಬೈ ಯಕ್ಷ ದಿಗ್ಗಜರನ್ನು ಗೌರವಿಸಲಾಯಿತು.

ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟಿಯವರು ಕಲಾವಿದರನ್ನು ಅಭಿನಂದಿಸಿ ಮಾತನಾಡಿದರು. ಬಳಿಕ ಗಾನ ಗಾಂಬೀರ್ಯ ನ್ರತ್ಯ ವೈವಿದ್ಯ ಕಾರ್ಯಕ್ರಮದಲ್ಲಿ ಖ್ಯಾತ ಸ್ರೀ ವೇಷದಾರಿ ಯಲಗುಪ್ಪ ಸುಬ್ರಮಣ್ಯ ಹೆಗಡೆ ಮತ್ತು ಕಡಬಾಳ ಉದಯ ಹೆಗಡೆಯವರಿಂದ ಸಾಲ್ವ ಶೃಂಗಾರದ ಭಾಗಗಳನ್ನು ಪ್ರದರ್ಶಿಸಲಾಯಿತು. ರಾಘವೇಂದ್ರ ಆಚಾರ್ಯರು ಹಿಮ್ಮೇಳದಲ್ಲಿ ಸಹಕರಿಸಿದರು.

ಮದ್ಯಾಹ್ನದ ಪಾತೆರೊದ ಪೊರ್ಲ್- ತಿರ್ಲ್ ಕಾರ್ಯಕ್ರಮದಲ್ಲಿ ಪೊಲ್ಯ ಲಕ್ಷ್ಮಿನಾರಾಯಣ ಶೆಟ್ಟಿ. ಸಿದ್ದಕಟ್ಟೆ ಚನ್ನಪ್ಪ ಶೆಟ್ಟಿ, ಜಬ್ಬಾರ್ ಸಮೋ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಮುಂತಾದವರ ಕೂಡುವಿಕೆಯಿಂದ ಕೋಟಿ-ಚೆನ್ನಯ ತಾಳಮದ್ದಳೆ ಜರುಗಿತು.

ಸಂಜೆ ನೆಡೆದ ಸಮಾರೋಪ ಕಾರ್ಯಕ್ರಮದಲ್ಲಿ ಕಟೀಲು ವೇದಮೂರ್ತಿ ಲಕ್ಷ್ಮಿನಾರಾಯಣ ಅಸ್ರಣ್ಣನವರು ಆಶೀವ್ರಚನ ನೀಡಿದರು. ಮುಂಬಯಿ ಬಂಟರ ಸಂಘದ ಅದ್ಯಕ್ಷರಾದ ಶಂಕರ ಶೆಟ್ಟಿಯವರ ಅದ್ಯಕ್ಷತೆಯಲ್ಲಿ ತೆಂಕುತಿಟ್ಟಿನ ಹಿರಿಯ ಕಲಾವಿದರಾದ ಪಾತಾಳ ವೆಂಕಟರಮಣ ಭಟ್, ಪೆರುವೋಡಿ ನಾರಾಯಣ ಭಟ್, ಉದ್ಯಾವರ ಜಯಕುಮಾರ್, ಬಜಾಲ್ ಜನಾರ್ದನ, ಬೋಳಾರ ಸುಬ್ಬಯ್ಯ ಶೆಟ್ಟಿ, ಸಂಜೀವ ಬಳೆಗಾರ್, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ್, ಉಜಿರೆ ನಾರಾಯಣ, ಜೋಕಟ್ಟೆ ಮಹಮ್ಮದ್, ದಾಸಪ್ಪ ರೈ. ಪುತ್ತೂರು ಶ್ರೀದರ ಭಂಡಾರಿ, ಶಿವಣ್ಣ ಆಚಾರ್ಯ, ಕಿನ್ನಿಗೋಳಿ ಮುಖ್ಯಪ್ರಾಣ, ರಮೇಶ ಆಚಾರ್ಯ, ಕೊಳ್ತಿಗೆ ನಾರಾಯಣ ಗೌಡ, ಪಟ್ಲ ಸತೀಶ್ ಶೆಟ್ಟಿಯವರನ್ನು ತಲಾ ಹತ್ತು ಸಾವಿರ ನಗದಿನೊಂದಿಗೆ ಪುರಸ್ಕರಿಸಲಾಯ್ತು.

ಇವರೊಂದಿಗೆ ಮುಂಬಯಿಯ ಪೊಲ್ಯ ಲಕ್ಷ್ಮೀನಾರಯಣ ಶೆಟ್ಟಿ, ಕೋಲ್ಯಾರು ರಾಜು ಶೆಟ್ಟಿ, ಪ್ರಕಾಶ್ ಪಣಿಯೂರು, ರಘುನಾಥ ಆಳ್ವ, ರಾಜೀವ ದರ್ಮಸ್ಥಳ, ಡಿ. ಮನೋಹರ ಕುಮಾರ್, ರವಿ. ಬಿ. ಶೆಟ್ಟಿ ಸುರತ್ಕಲ್, ನಾರಾಯಣ ಶೆಟ್ಟಿ , ಶಂಕರ ಶೆಟ್ಟಿ ಇವರಿಗೆ ವ್ಯಕ್ತಿ ಗೌರವ ಸಲ್ಲಿಸಲಾಯಿತು. ಕರ್ನಾಟಕ ಸಂಘ ಮಾಟುಂಗ, ಕನ್ನಡ ಕಲಾ ಕೇಂದ್ರ ಸಯನ್, ಸಂಸ್ಥೆಗಳಿಗೆ ಗೌರವ ಪುರಸ್ಕಾರ ನೀಡಲಾಯಿತು. ಕರ್ನೂರು ಮೋಹನ್ ರೈ ಅಭಿನಂದನಾ ಬಾಷಣ ಮಾಡಿದರು.

ಸಮಾರೋಪದ ನಂತರ ರಾತ್ರಿ ನೆಡೆದ ತೆಂಕುತಿಟ್ಟು ಕಲಾವಿದರ ವಾಲಿಮೋಕ್ಷ ಬಯಲಾಟದಲ್ಲಿ ವಾಲಿಯಾಗಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ ಮತ್ತು ಜಬ್ಬಾರ್ ಸಮೋ, ಶ್ರೀರಾಮನಾಗಿ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ಮತ್ತು ಚೆನ್ನಪ್ಪ ಶೆಟ್ಟಿ, ಸುಗ್ರೀವನಾಗಿ ಸುಣ್ಣಂಬಲ ವಿಶ್ವೇಶ್ವರ ಭಟ್, ತಾರೆಯಾಗಿ ಶಶಿಕಾಂತ ಶೆಟ್ಟಿ ಬಾಗವಹಿಸಿದರು. ಪಟ್ಲ ಸತೀಶ ಶೆಟ್ಟಿ ಬಳಗದವರು ಹಿಮ್ಮೇಳದಲ್ಲಿ ಸಹಕರಿಸಿದರು.

ಒಟ್ಟಾರೆಯಾಗಿ ಸುವ್ಯವಸ್ಥಿತ ಆಸನ ವ್ಯವಸ್ಥೆ, ಊಟೋಪಚಾರ ಅಚ್ಚುಕಟ್ಟಿನ ಸಬಾಕರ್ಯಕ್ರಮದ ನಿರ್ವಹಣೆ, ನೂರಾರು ಹಿರಿಯ ಕಿರಿಯ ಕಲಾವಿದರ ಒಕ್ಕೋಟ ಬೆಳಿಗ್ಗಿನಿಂದ ರಾತ್ರಿವರೆಗೆ ಶಿಸ್ತಿನಿಂದ ಕುಳಿತು ಕಾರ್ಯಕ್ರಮ ವೀಕ್ಷೀಸಿದ ಸಹಸ್ರಾರು ಪ್ರೇಕ್ಷಕರು ಮುಂತಾದ ಆಂಶಗಳಿಂದ ಕಾರ್ಯಕ್ರಮ ಯಶಸ್ವಿಯಾಯಿತು. ಒಂದು ವರ್ಷದಿಂದ ತಯಾರಿ ನೆಡಿಸಿ ಮರೆಯಲಾರದ ಕಾರ್ಯಕ್ರಮ ನೀಡಿದ ಯಕ್ಷ ಪ್ರಕಾಶದ ಕಾರ್ಯಕರ್ತರು ಮುಖ್ಯವಾಗಿ ರೂವಾರಿಯಾದ ಪ್ರಕಾಶ ಎಂ. ಶೆಟ್ಟರು ಅಭಿನಂದನಾರ್ಹರು.

ಸಮಾರ೦ಭದ ಚಿತ್ರಗಳು





















ಚಿತ್ರ/ವರದಿ ಕೃಪೆ : ರೋನ್ಸ್ ಬಂಟ್ವಾಳ್

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
N VITTAL HEGDE(10/17/2013)
Nijakkoo sangraha yogya lekhana mattu drishyagalu.




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ